Saturday, July 26, 2008

eeranna vedeo presesntation by shekar ajekar-26th july

eeranna vedeo presesntation by shekar ajekar-26th july

eeranna vedeo presesntation by shekar ajekar

eeranna vedeo presesntation by shekar ajekar

edited by:shankar naik

Friday, July 25, 2008

eerana 2

eernan

Eranna kundaragimatt vedeo 1

kundaragimatt vedeo

prsentation by-shekar ajekar

edited by-shekar naik sampige

vedeo presentation of kundaragimatt eeranna

Kundaragi matt vedeo-edited by Shankar naik sampige

presentation: shekar ajekar

Thursday, July 24, 2008

EEranna Kundaragimatt's bike race photo album 2 /ಕೈ ಬಿಟ್ಟೆ ಬೈಕ್‌ನಲ್ಲಿ ಸಾಹಸ - ಈರಣ್ಣ ಕುಂದರಗಿ ಮಠ ಸಾಧನೆ











Kundaragimatt bike race photos






















ಈರಣ್ಣ ಕುಂದರಗಿ ಮಠ - by shekar ajekar

ಕೈ ಬಿಟ್ಟೆ ಬೈಕ್‌ನಲ್ಲಿ ಸಾಹಸ - ಈರಣ್ಣ ಕುಂದರಗಿ ಮಠ ಸಾಧನೆ
ಮನೆಯಿಂದ ಹೊರಡುವಾಗ ಅನುಭವಿ ಬೈಕ್ ಸವಾರರಿಗೂ ಮನೆ ಮಂದಿ ಜಾಗ್ರತೆ ಎಂದು ಎಚ್ಚರಿಸಬೇಕಾದ ಸ್ಥಿತಿಯಿದೆ.ಮೈಯೆಲ್ಲಾ ಕಣ್ಣಾಗಿಸಿ ,ಎಕ್ಸ್ ಲೇಟರ್ , ಬ್ರೇಕ್॒॒॒॒॒॒॒ಎ॒ಲ್ಲವನ್ನು ಹಿಡಿದು ಕೊಂಡು ಸವಾರಿ ಮಾಡುವಾಗಲೂ ಸಣ್ಣದೊಂದು ನಡುಕ!!!!ಆದರೆ ಕೈ ಬಿಟ್ಟೇ ಬೈಕ್ ಸವಾರಿ ಮಾಡುವುದನ್ನು ಹವ್ಯಾಸವಾಗಿಸಿ ಕೊಂಡಿರುವ ೨೮ ರ ಹರೆಯುದ ಯುವಕನೊಬ್ಬ ಈ ಹವ್ಯಾಸದಲ್ಲೇ ಗಿನ್ನಿಸ್- ಲಿಮ್ಕಾ ದಾಖಲೆ ಮಾಡಲು ಹೊರಟಿದ್ದಾನೆ. ಆ ಸಾಧಕನ ಹೆಸರು ಈರಣ್ಣ ಜಿ.ಕುಂದರಗಿಮಠ. ಯಾವುದೇ ಭಯವಿಲ್ಲದೇ ೧೦೦ ರಿಂದ ೫೦೦ ಕೀ.ಮೀ ಕೈಬಿಟ್ಟೇ ಬೈಕ್ ಓಡಿಸುವುದು ಅವರಿಗೆ ನೀರು ಕುಡಿದಷ್ಠೇ ಸಲೀಸು.ನೀರು ಕುಡಿಯುವುದು,ತಿಂಡಿ ತಿನ್ನುವುದು, ಬಟ್ಟೆ ಬದಲಾಯಿಸುವುದು,ಸೀಟಿನ ಮೇಲೆ ಮೇಲೆ ಕಾಲು ಮಡಚಿ ಕುಳಿತು ಮಾಡುವ ಕೆಲಸಗಳಷ್ಟೇ ಸುಲಭ ಮತ್ತು ಸೌಖ್ಯದ ವಿಷಯ ಅವರಿಗೆ.ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರೂ ಆಗಿರುವ ಈರಣ್ಣ ಕನ್ನಡ ಗೀತೆಗಳನ್ನು ಹಾಡುತ್ತಾ, ಕೈ ಬಿಟ್ಟು, ನಿಂತು ನೃತ್ಯ ಮಾಡುತ್ತಾ ಸಾಗುವ ಪರಿ ವಿಶೇಷ.ಈರಣ್ಣನಿಗೆ ಇದೊಂದು ವರ.ಮುಖ್ಯ ರಸ್ತೆಗಳಲ್ಲಿ ಸಾಗುವಾಗ ಎದುರಿನಿಂದ, ಹಿಂದಿನಿಂದ ಬಸ್-ಲಾರಿ ಯಾವುದೇ ವಾಹನಗಳು ಬರಲಿ, ಸ್ಪೀಡ್ ಬ್ರೇಕರ್‌ಗಳು ಸಿಗಲಿ ಇದ್ಯಾವುದು ಅವರಿಗೆ ಸವಾಲೇ ಅಲ್ಲ. ಹದಿನೈದರ ಹರೆಯದಿಂದಲೇ ಬೈಕ್ ಸವಾರಿಯ ಹವ್ಯಾಸವನ್ನು ರೂಢಿಸಿ ಕೊಂಡಿರುವ ಈರಣ್ಣ ಕೈಬಿಟ್ಟು ಸವಾರಿ ಮಾಡುವುದನ್ನು ಕಳೆದ ಹತ್ತು ವರ್ಷಗಳಿಂದ ಹವ್ಯಾಸವಾಗಿಸಿ ಕೊಂಡಿದ್ದಾರೆ.ಐದರಿಂದ ಆರು ಘಂಟೆಗಳ ಕಾಲ ಬೈಕ್ ಸವಾರಿ ಹೀಗೆ ಮಾಡುವುದು ಈರಣ್ಣನಿಗೆ ಸವಾಲೇ ಅಲ್ಲ.ಈರಣ್ಣನ ಸಾಹಸದ ಕಥೆ ಅವರ ಮಾತುಗಳಲ್ಲಿ॒॒॒॒॒॒॒ಸ್ಪೂರ್ತಿ ಹೇU?ಮೊದಲೇ ಹವ್ಯಾಸವಿತ್ತು .ಟಿ.ವಿ ಚಾನೆಲ್ ಒಂದರ ಸಾಹಸ ಕಾರ್ಯಕ್ರಮವೊಂದು ಸ್ಪೂರ್ತಿ ನೀಡಿತು. ಈಗ ಬೈಕಲ್ಲೇ ಊಟ ತಿಂಡಿ ಮಾಡಬಲ್ಲೆ. ಈ ಸಾಹಸದ ಹವ್ಯಾಸವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ.
ಎಲ್ಲೆಲ್ಲಾ ಸಾಹಸ॒॒॒.॒ಬೆಳಗಾವಿಯಿಂದ ಇಳಕಲ್‌ವರೆಗೆ ೨೨೦ ಕೀ.ಮಿ ಅಂತರ ಪೂರೈಸಿದ್ದೇನೆ. ಇಳಕಲ್-ಬಾಗಲಕೋಟೆ, ಇಳಕಲ್- ಬಿಜಾಪುರ, ಇಳಕಲ್-ಕೂಡಲಸಂಗಮ ನಡುವೆ ಹತ್ತಾರು ಬಾರಿ ಈ ರೀತಿಯ ಸಾಹಸ ಮಾಡಿದ್ದೇನೆ. ಈಗ ನನ್ನ ಸಾಹಸಕ್ಕೆ ಹೀರೋ ಹೊಂಡಾ ಸಿ-ಡಿ ಡೀಲೆಕ್ಸ್ ಬೈಕ್ ಸಾಥಿಯಾಗಿದೆ.ಮೊದಲು ಸುಜುಕಿ ಕಂಪನಿಯ ಬೈಕ್ ಉಪಯೋಗಿಸುತ್ತಿದ್ದೆ.
ಬ್ಯಾಲೆನ್ಸ್ ಮಾಡುವುದು ಹೀಗೆ---ಬೈಕ್ ಹೊರಟ ಮೇಲೆ ಕುಳಿತ ಭಂಗಿಯಿಂದಲೇ ಬೈಕನ್ನು ಮುಟ್ಟದೇ ಕೈಯ ಸಮತೋಲನದಿಂದ ಅದನ್ನು ನಿಯಂತ್ರಿಸುತ್ತಾ ಮುಂದುವರಿಯುತ್ತೇನೆ.ಸೊಂಟ, ದೇಹವನ್ನು ಕೈಯಂತೆ ವಾಹನದ ಸಮತೋಲನಕ್ಕೆ ಬಳಸುತ್ತಾ ಮುಂದುವರಿಯುವೆ.ಇದೆಲ್ಲಾ ನಿಮ್ಮ ಪ್ರಯತ್ನ ದ ಫಲವೇ॒॒.॒ ಎಲ್ಲಾ ದೇವರ ದಯೆ.॒ಇದೆಲ್ಲಾ ದೇವರ ದಯೆ. ಮನುಷ್ಯನಿಂದಲೇ ಇದೆಲ್ಲಾ ಸಾಧ್ಯವಾಗದ ವಿಷಯ.ನಾನು ನಿಮಿತ್ತ ಮಾತ್ರ.॒
ಬೈಕಿನ ತಾಂತ್ರಿಕ ನಿರ್ವಹಣೆ ಹೇಗೆ ?ಬೈಕನ ಎಕ್ಸಿಲೇಟರ್‌ನ್ನು ತನಗೆ ಬೇಕಾದ ವೇಗಕ್ಕೆ ಹೊಂದುವಂತೆ ಕರ್ಚೀಫ್‌ನಿಂದ ಬಿಗಿದು ಕಟ್ಟುತ್ತೇನೆ. ಉಳಿದಂತೆ ಬೈಕ್ ಸವಾರಿ ಆರಂಭವಾದಗಿನಿಂದ ಕಾಲು,ಸೊಂಟ ಇವೇ ನನಗೆ ಕೈಗಳಂತೆ.ಜೀವನ ಉಪಾಯಕ್ಕಾಗಿ ಏನು?ಜೀವನೋಪಯಕ್ಕಾಗಿ ಮಂಡಕ್ಕಿ ಭಟ್ಟಿ ನಡೆಸುತ್ತಾ ಇದ್ದೀನಿ. ಅದು ನನ್ನ ತಂದೆಯವರಿಂದ ಬಂದದ್ದು. ಇದೆಲ್ಲ ಹವ್ಯಾಸ ಗೆಳೆಯರ -ಅಭಿಮಾನಿಗಳ ಸಹಕಾರದಿಂದ ನಡೆಯುತ್ತಿದೆ. ಮುಂದಿನ ಗುರಿ॒.॒.ಹವ್ಯಾಸವಾಗಿರುವ ಈ ಬೈಕ್ ಸವಾರಿಯನ್ನು ಲಿಮ್ಕಾ- ಗಿನ್ನಿಸ್ ದಾಖಲೆಯ ಪುಟಕ್ಕೆ ಸೇರಿಸುವ ಆಸೆಯಿದೆ. ಸರ್ಕಾರಿ ಅಧಿಕಾರಿಗಳು, ಸಂಘ ಸಂಸ್ಥೆಗಳು ಸೂಕ್ತ ಸಲಹೆ ಸಹಕಾರ ನೀಡಿದರೆ ೧೦೦೦ ಕೀ.ಮಿ ದೂರವನ್ನು ಕ್ರಮಿಸಿ ದಾಖಲೆ ಬರೆಯ ಬೇಕೆಂದಿದ್ದೇನೆ. ಎಲ್ಲರ ಸಹಕಾರ ಬೇಕು.
ಶೇಖರ ಅಜೆಕಾರು,ಪತ್ರಕರ್ತ,ಅಜೆಕಾರು-೫೭೪೧೦೧ಉಡುಪಿ ಜಿಲ್ಲೆ೯೩೪೨೪೮೪ ೦೫೩